ಆಧ್ಯಾತ್ಮಿಕ ವಿಚಾರ.
ತೀರ್ಥವನ್ನು ಮೂರು ಬಾರಿ ಸ್ವೀಕರಿಸುವುದು ಯಾಕೆ?
ಆದ್ಯಂ ಕಾಯವಿಶುದ್ಧ್ಯರ್ಥಂ ದ್ವಿತೀಯಂ ಧರ್ಮಸಾಧನಮ್ ತೃತೀಯಂ ಮೋಕ್ಷದಂ ಪ್ರೋಕ್ತಂ ಏವಂ ತೀರ್ಥಂ ತ್ರಿಧಾಪಿಬೇತ್ ॥
ಮೊದಲನೆಯದು ಶರೀರಶುದ್ಧಿಗೆ,
ಎರಡನೆಯದು ಧರ್ಮಸಾಧನೆಗೆ,
ಮೂರನೆಯದು ಮೋಕ್ಷ ಪಡೆಯಲು ಮೂರು ಬಾರಿ ತೀರ್ಥಪ್ರಾಶನ ಮಾಡಬೇಕು.
ಇಂತಹ ಪವಿತ್ರವಾದ ತೀರ್ಥಕ್ಕೆ ‘ಅಷ್ಟಾಂಗತೀರ್ಥ’ವೆನ್ನುತ್ತಾರೆ.
ಶಿಲಾ ತಾಮ್ರಂ ತಥಾ ತೋಯಂ ಶಂಖಃ ಪುರುಷಸೂಕ್ತಮ್ ಗಂಧೋ ಘಂಟಾ ಚ ತುಲಸೀತಾಂಗಂ ತೀರ್ಥಮುಚ್ಯತೇ ॥
ಶಾಲಿಗ್ರಾಮ, ತಾಮ್ರ ಅಥವಾ ಬೆಳ್ಳಿ ಪಾತ್ರ, ಶಂಖದಿಂದ ಅಭಿಷೇಕವಾದ ನೀರು , ಪುರುಷ ಸೂಕ್ತ ಮಂತ್ರದ ಪಾಠ, ಗಂಧ, ಘಂಟಾನಾದ ಮತ್ತು ತುಲಸಿ ಇವುಗಳಿಂದ ಸಿದ್ಧವಾದುದೇ “ಅಷ್ಟಾಂಗತೀರ್ಥ”ವು]
ದೇವಸ್ಥಾನದಲ್ಲಿ ತೀರ್ಥ ಸೇವನೆ ಮಾಡುವ ಕ್ರಮ
1.ತೀರ್ಥವನ್ನು ಬಲಗೈಯಲ್ಲಿಯೇ ಸ್ವೀಕರಿಸಬೇಕೆಂಬುದು ನಿಯಮ.
2.ಕೈಕೆಳಗೆ ವಸ್ತ್ರವೊಂದನ್ನು ಇಲ್ಲವೇ ಉತ್ತರೀಯವನ್ನು, (ಸ್ತ್ರೀಯರು ತಮ್ಮ ಸೀರೆಯ ಸೆರಗಿನ ತುದಿಯನ್ನು) ಹಿಡಿದಿರಬೇಕು. ಇದರ ಉದ್ದೇಶವೇನೆಂದರೆ, ಸ್ವೀಕರಿಸುವಾಗ ಅಥವಾ ಪ್ರಾಶನ ಮಾಡುವಾಗ ತೀರ್ಥವು ಕೆಳಗೆ ಬೀಳದಂತೆ ಎಚ್ಚರ ವಹಿಸುವುದಾಗಿದೆ.
2.ತೀರ್ಥವನ್ನು ಸ್ವೀಕರಿಸುವಾಗ ನಮ್ಮ ತೋರುಬೆರಳನ್ನು ಹೆಬ್ಬೆರಳಿನ ಅಂತಿಮ ರೇಖೆಗೆ ಮುಟ್ಟುವಂತೆ ಮಡಿಸಿ ಅದರ ಮೇಲೆ ಹೆಬ್ಬೆರಳನ್ನು ಮಡಿಚಿಡಬೇಕು. ಉಳಿದ ಮೂರು ಬೆರಳುಗಳಲ್ಲಿ ಮಧ್ಯದ ಬೆರಳು ಮೇಲಿರುವಂತೆ, ನಂತರ ಉಂಗುರದ ಬೆರಳು ಮತ್ತು ಕೊನೆಯಲ್ಲಿ ಕಿರುಬೆರಳಿರುವಂತೆ ನೇರವಾಗಿ ಚಾಚಿರಬೇಕು.
- ಪ್ರಪ್ರಥಮವಾಗಿ ತೀರ್ಥವನ್ನು ತಲೆಯಮೇಲೆ ಪ್ರೋಕ್ಷಿಸಿಕೊಳ್ಳಬೇಕು. (ಮಧ್ವಗುರು ಪೂಜೆಯಲ್ಲಾದರೂ ಸರಿ)
- ಮುಂಜಾನೆ ಸಂಧ್ಯಾವಂದನೆ ;ದೇವರಪೊಜೆ ನಂತರ ಆಹಾರ ಸೇವನೆಗೂ ಮೊದಲು ಮೂರೂ ಸಲ ತೀರ್ಥವನ್ನು ಸ್ವೀಕರಿಸಬೇಕು.(ಸಾತ್ವಿಕ ಆಹಾರ ಇದ್ದಲ್ಲಿ ಅಡ್ಡಿ ಇಲ್ಲ )
6.ಮಹಾಪೂಜೆ ಯಲ್ಲೂ ಸಹ ಊಟದ ಮೊದಲು ಮೂರೂ ಸಲ ತೀರ್ಥವನ್ನು ಸ್ವೀಕರಿಸಬೇಕು.(ಏಕಾದಶಿಯಂದು ಒಂದೇ ಸಲ ತೀರ್ಥ ಪ್ರಾಶನ ಮಾಡಬೇಕು)
- ತೀರ್ಥ ಸ್ವೀಕರಿಸುವಾಗ ತುಟಿಗೆ ತಾಗಿಸದೆ, ಶಬ್ದ ಮಾಡದೆ ಸ್ವಲ್ಪ ಬದಿಗೆ ಸರಿದು ತೆಗೆದು ಕೊಳ್ಳಬೇಕು ಹಾಗೂ ಸ್ವೀಕರಿಸಿದ ನಂತರ ಅದರ ತೇವಾಂಶವನ್ನು ಕೈಗಳ ಕೆಳಗೆ ಹಿಡಿದಿದ್ದ ವಸ್ತ್ರದಿಂದ ಅದನ್ನು ಒತ್ತಿಕೊಂಡು ಒರೆಸಿಕೊಳ್ಳಬೇಕು ನಂತರ ಹೂವು ಹಾಗೂ ಉಳಿದ ಪ್ರಸಾದ ಸ್ವೀಕಾರ ಮಾಡಬೇಕು
8.ತೀರ್ಥವನ್ನು ಸ್ವೀಕರಿಸುವಾಗ ದೇಹವನ್ನು ಬಗ್ಗಿಸಿರಬೇಕು. ಇದು ದೇವರ ಅಭೀಷೇಕದ ತೀರ್ಥಕ್ಕೆ ನಾವು ನೀಡುವ ಗೌರವ ಮತ್ತು ತೋರುವ ಭಕ್ತಿಯ ಸಂಕೇತವಾಗಿರುತ್ತದೆ.
9.ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ* :
ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸರ್ವ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll
ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇವರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll
🙏
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
ಅಡ್ಮಿನ್ ಬಳಗ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://chat.whatsapp.com/It4IhsGZj0WFIcFLGVhbu6
⬆️ಇಲ್ಲಿ ಕ್ಲಿಕ್ ಮಾಡಿ.
Leave a Reply