ಶ್ರೀ ಲಲಿತಾ ಸಹಸ್ರನಾಮ ಪಠಿಸೋದು ಹೇಗೆ..? ಪ್ರಯೋಜನವೇ ಅಪಾರ..!
ವಿಶೇಷ ಶಕ್ತಿ ಮತ್ತು ಅಧಿಕ ಪ್ರಾಮುಖ್ಯತೆಯನ್ನು ಹೊಂದಿರುವ ಮಂತ್ರವೆಂದರೆ ಅದುವೇ ಶ್ರೀ ಲಲಿತಾ ಸಹಸ್ರನಾಮ. ಶ್ರೀ ಲಲಿತಾ ಸಹಸ್ರನಾಮವನ್ನು ಪ್ರತಿನಿತ್ಯ ಅದರಲ್ಲೂ ಶುಕ್ರವಾರ ತಪ್ಪದೇ ಪಠಿಸಬೇಕು. ಲಲಿತಾ ಸಹಸ್ರನಾಮವನ್ನು ಪಠಿಸುವುದು ಹೇಗೆ..? ಶ್ರೀ ಲಲಿತಾ ಸಹಸ್ರನಾಮ ಪಠಿಸುವುದರ ಪ್ರಯೋಜನವೇನು..?
ಶ್ರೀ ಲಿಲತಾ ಸಹಸ್ರನಾಮ ಎನ್ನುವುದು ಬ್ರಹ್ಮಪುರಾಣದ ಒಂದು ಪಠ್ಯ. ಲಲಿತಾ ಆನಂದ ದೇವತೆ, ಈಕೆ ಪರಶಿವನ ಪತ್ನಿ ಪಾರ್ವತಿ ದೇವಿಯ ರೂಪ. ಶ್ರೀ ಲಲಿತಾ ಸಹಸ್ರನಾಮ ಅತ್ಯಂತ ಪವಿತ್ರವಾದ ಮಂತ್ರವಾಗಿದೆ. ಭಗವಾನ್ ಹಯಗ್ರೀವ ಮತ್ತು ಅಗಸ್ತ್ಯ ಮುನಿಗಳ ಚರ್ಚೆಯಿಂದ ಹೊರಹೊಮ್ಮಿದ ಮಂತ್ರವೇ ಶ್ರೀ ಲಿಲತಾ ಸಹಸ್ರನಾಮ. ಇದು ಅತ್ಯಂತ ಶಕ್ತಿಯುತವಾದ ಮಂತ್ರವಾಗಿದೆ. ಹಾಗೂ ಲಲಿತಾ ದೇವಿಯ ಅತ್ಯಂತ ನೆಚ್ಚಿನ ಮಂತ್ರವಾಗಿದೆ.
ಲಲಿತಾ ಸಹಸ್ರನಾಮ
ಲಲಿತಾ ಸಹಸ್ರನಾಮವನ್ನು ಪಠಿಸುವ ವಿಧಾನ:
1) ಲಲಿತಾ ಸಹಸ್ರನಾಮವನ್ನು ಪಠಿಸುವ ಮೊದಲು ಸ್ನಾನ ಮಾಡಬೇಕು ಅಥವಾ ಕೈ – ಕಾಲುಗಳನ್ನು ತೊಳೆದುಕೊಳ್ಳಬೇಕು.
2) ಕುಳಿತುಕೊಳ್ಳಲು ಆರಾಮದಾಯಕ ಸ್ಥಳವನ್ನು ಅಥವಾ ಆಸನವನ್ನು ಆಯ್ದುಕೊಳ್ಳಿ. ದೇವರ ಕೋಣೆಯಲ್ಲಿ ಚಾಪೆಯನ್ನು ಹಾಸಿಕೊಂಡು ಕೂಡ ಕುಳಿತುಕೊಳ್ಳಬಹುದು.
3) ಮಾನಸಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಯಾವಾಗಲೂ ಸಕಾರಾತ್ಮಕ ಆಲೋಚನೆಯನ್ನೇ ಹೊಂದಲು ಪ್ರಯತ್ನಿಸಬೇಕು.
4) ಮಂತ್ರವನ್ನು ಸರಿಯಾದ ಉಚ್ಚಾರಣೆಯಿಂದ ಪಠಿಸಬೇಕು.
5) ಶ್ರದ್ಧಾ ಮತ್ತು ಭಕ್ತಿಯಿಂದ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸಬೇಕು. ದೇವಿಯು ನಿಮ್ಮನ್ನೇ ನೋಡುತ್ತಿದ್ದಾಳೆಂದು ಎಣಿಸಿ ಮಂತ್ರವನ್ನು ಪಠಿಸಿ.
6) ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಂತ್ರವನ್ನು ಪಠಿಸಿ.
7) ಸಂಪೂರ್ಣ ದಿನ ದೈಹಿಕವಾಗಿ ಅಥವಾ ಮಾನಸಿಕವಾಗಿ ಇತರರನ್ನು ನೋಯಿಸದಿರಿ.
8) ಮಂತ್ರವನ್ನು ಓದುವಾಗ ಪ್ರತಿಯೊಂದು ಸಾಲುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
9) ಮಂತ್ರದ ಅರ್ಥವನ್ನು ತಿಳಿದುಕೊಂಡು ಅದನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ.
10) ಮಂತ್ರದ ಕೊನೆಯಲ್ಲಿ ದೇವಿಗೆ ಜಪವನ್ನು ಅರ್ಪಿಸಿ.
ಲಲಿತಾ ಸಹಸ್ರನಾಮ ಪಠಿಸುವ ವಿಧಾನ
ಲಲಿತಾ ಸಹಸ್ರನಾಮ ಪಠಿಸುವುದರ ಪ್ರಯೋಜನ:
1) ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ಪವಿತ್ರ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಆಹಾರವನ್ನು ದಾನ ಮಾಡಲು ಆಗದಿದ್ದರೆ ಅಥವಾ ದೇವರಿಗೆ ಯಾವುದೇ ರೀತಿಯ ಅರ್ಪಣೆಗಳನ್ನು ಮಾಡಲು ಸಾಧ್ಯವಾಗದಿದ್ದರೆ ನೀವು ಲಲಿತಾ ಸಹಸ್ರನಾಮವನ್ನು ಪಠಿಸುವ ಮೂಲಕ ಈ ಎಲ್ಲಾ ಅಂಶಗಳ ಶುಭ ಫಲವನ್ನು ಪಡೆದುಕೊಳ್ಳಬಹುದು.
2) ಶ್ರೀ ಲಲಿತಾ ಸಹಸ್ರನಾಮವನ್ನು ನಿಯಮಿತವಾಗಿ ಪಠಿಸುವುದರಿಂದ ಅಪೂರ್ಣವಾದ ಪೂಜೆಯಿಂದುಂಟಾಗುವ ಕಷ್ಟವನ್ನು ದೂರಾಗಿಸುತ್ತದೆ.
3) ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸುವುದರಿಂದ ಅಕಾಲಿಕ ಮರಣದ ಭಯವನ್ನು ದೂರಾಗಿಸುತ್ತದೆ. ದೀರ್ಘ ಮತ್ತು ಉತ್ತಮ ಆರೋಗ್ಯಕರ ಜೀವನವನ್ನು ನೀಡುತ್ತದೆ.
4) ವ್ಯಕ್ತಿಯ ಹಣೆಯನ್ನು ಹಿಡಿದು ಧಾರ್ಮಿಕವಾಗಿ ಲಲಿತಾ ಸಹಸ್ರನಾಮವನ್ನು ಜಪಿಸಿದರೆ ಜ್ವರವು ಕಡಿಮೆಯಾಗುತ್ತದೆ. ನೀವು ಎಷ್ಟು ಬಾರಿ ಲಲಿತಾ ಸಹಸ್ರನಾಮವನ್ನು ಜಪಿಸುತ್ತೀರೋ ಅಷ್ಟು ಬಾರಿ ಶುಭ ಫಲಿತಾಂಶವನ್ನು ಪಡೆಯುವಿರಿ. ಶ್ರೀ ಲಲಿತಾ ಸಹಸ್ರನಾಮ ಅರ್ಚನೆಗೆ ಬಳಸಿದ ವಿಭೂತಿಯನ್ನು ಹಣೆಗೆ ಹಚ್ಚುವುದರಿಂದ ಕೂಡ ಜ್ವರ ಮತ್ತು ತಲೆನೋವು ಕಡಿಮೆಯಾಗುತ್ತದೆ.
5) ಗ್ರಹಗಳಿಗೆ ಸಂಬಂಧಿಸಿದ ಮತ್ತು ದುಷ್ಟ ಶಕ್ತಿಗಳಿಗೆ ಸಂಬಂಧಿಸಿದ ತೊಂದರೆಗಳಿಂದ ಹೊರಬರಲು ಒಂದು ಪಾತ್ರೆ ನೀರನ್ನು ಅಥವಾ ಒಂದು ಲೋಟ ನೀರನ್ನು ಧಾರ್ಮಿಕವಾಗಿ ತಲೆಯ ಮೇಲೆ ಸುರಿದುಕೊಂಡು ಶ್ರೀ ಲಲಿತಾ ಸಹಸ್ರನಾಮ ಜಪಿಸಬೇಕು.
6) ವಿಷಕ್ಕೆ ಸಂಬಂಧಿಸಿದ ಯಾವುದೇ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವವರು ಲಲಿತಾ ದೇವಿಯ ಚಿತ್ರವನ್ನು ಮನಸ್ಸಿಲ್ಲಿಟ್ಟುಕೊಂಡು ಸಹಸ್ರನಾಮ ಜಪಿಸಬೇಕು.
7) ದುರ್ಬಲತೆಯನ್ನು ದೂರಾಗಿಸಿಕೊಳ್ಳಲು, ಸಂತಾನ ಭಾಗ್ಯಕ್ಕಾಗಿ ಓರ್ವ ವ್ಯಕ್ತಿಯು ಲಲಿತಾ ಸಹಸ್ರನಾಮ ಜಪಿಸುವಾಗ ಇಟ್ಟುಕೊಂಡ ತುಪ್ಪವನ್ನು ಸೇವಿಸಬೇಕು.
8) ಶ್ರೀ ಲಲಿತಾ ಸಹಸ್ರನಾಮವನ್ನು ನಿಯಮಿತವಾಗಿ ಪಠಿಸುವುದರಿಂದ ಸುತ್ತಮುತ್ತಲಿನ ವಾತಾವರಣವು ಶುದ್ಧವಾಗುತ್ತದೆ. ನಮ್ಮ ದೇಹದ ಪ್ರತಿಯೊಂದು ನರಗಳು ಉತ್ತೇಜನಗೊಳ್ಳುತ್ತದೆ. ಮತ್ತು ವ್ಯಕ್ತಿಯಲ್ಲಿನ ಸೂಕ್ಷ್ಮ ಶಕ್ತಿಯು ಜಾಗೃತಗೊಳ್ಳುತ್ತದೆ.
9) ಶ್ರೀ ಲಿಲತಾ ಸಹಸ್ರನಾಮವನ್ನು ನಿಯಮಿತವಾಗಿ ಜಪಿಸುವ ವ್ಯಕ್ತಿಯನ್ನು ಲಲಿತಾ ದೇವಿಯು ಅಪಘಾತಗಳಿಂದ ಮತ್ತು ಶತ್ರುಗಳಿಂದುಂಟಾಗುವ ಸಮಸ್ಯೆಗಳನ್ನು ದೂರಾಗಿಸಿ, ಅವರನ್ನು ವಿಜಯಶಾಲಿಯಾಗುವಂತೆ ಮಾಡುತ್ತಾಳೆ.
10) ಶುಕ್ರವಾರದಂದು ವಿಶೇಷವಾಗಿ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸಬೇಕು. ನಿಯಮಿತವಾಗಿ ಲಲಿತಾ ಸಹಸ್ರನಾಮ ಓದುವುದರಿಂದ ಆ ವ್ಯಕ್ತಿಯಲ್ಲಿ ಶಕ್ತಿ, ಖ್ಯಾತಿ, ಇಚ್ಛಾಶಕ್ತಿ ಹೆಚ್ಚಾಗುತ್ತದೆ.
11) ಯಾವುದೇ ಸಮಯದಲ್ಲಿ ಮತ್ತು ಪ್ರತೀ ಬಾರಿಯೂ ಜಪಿಸಬಹುದಾದ ಒಂದು ಪ್ರಾರ್ಥನೆಯ ರೂಪವೇ ಶ್ರೀ ಲಲಿತಾ ಸಹಸ್ರನಾಮವಾಗಿದೆ.
12) ಒಮ್ಮೆ ಶಿವನ ಹೆಸರನ್ನು ಜಪಿಸುವುದು ಮಹಾವಿಷ್ಣುವಿನ ಹೆಸರನ್ನು ಜಪಿಸಿದಷ್ಟು ಉತ್ತಮವೆಂದು ಹೇಳಲಾಗಿದೆ. ಒಮ್ಮೆ ಲಲಿತಾ ದೇವಿಯ ಹೆಸರನ್ನು ಜಪಿಸುವುದರಿಂದ ಶಿವನ ಹೆಸರನ್ನು ಸಾವಿರ ಬಾರಿ ಜಪಿಸುವಷ್ಟು ಉತ್ತಮ.
13) ಕುಟುಂಬದ ಎಲ್ಲಾ ಸದಸ್ಯರು ಜೊತೆಯಾಗಿ ಶ್ರೀ ಲಲಿತಾ ಸಹಸ್ರನಾಮವನ್ನು ಸಂಜೆ ಸಮಯದಲ್ಲಿ ಅಥವಾ ಬೆಳಗ್ಗೆ ಜಪಿಸುವುದರಿಂದ ಆ ಕುಟುಂಬದಲ್ಲಿ ಏಕತೆ, ಶಾಂತಿ, ಸ್ಪಷ್ಟ ಮನಸ್ಸು ಮತ್ತು ಸಮೃದ್ಧಿ ನೆಲೆಯಾಗುತ್ತದೆ.
ಲಲಿತಾ ಸಹಸ್ರನಾಮದ ಪ್ರಯೋಜನ
14) ಶ್ರೀ ಲಲಿತಾ ಸಹಸ್ರನಾಮವನ್ನು ನಿಯಮಿತವಾಗಿ ಜಪಿಸುವ ಮನೆಗಳಲ್ಲಿ ಜೀವನದ ಮೂಲಭೂತ ಅವಶ್ಯಕತೆಗಳಿಗೆ ಎಂದಿಗೂ ಕೊರತೆಯಾಗುವುದಿಲ್ಲ.
15) ಧಾರ್ಮಿಕವಾಗಿ ಶ್ರೀ ಲಲಿತಾ ಸಹಸ್ರನಾಮವನ್ನು ಜಪಿಸುವುದರಿಂದ ಕಾಳಿ ಮಾತೆಯ, ದುರ್ಗಾ ದೇವಿಯ, ದೇವತೆಗಳ, ಪರಾಶಕ್ತಿಯ ಮತ್ತು ಭಗವತಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು.
16) ದಿನನಿತ್ಯ ಎದುರಾಗುವ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಲು ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸಬೇಕು.
ಲಲಿತಾ ಸಹಸ್ರನಾಮವನ್ನು ಪ್ರತಿನಿತ್ಯ ಪಠಿಸಬೇಕು. ಅದರಲ್ಲೂ ಶುಕ್ರವಾರ ಲಲಿತಾ ಸಹಸ್ರನಾಮ ಪಠಿಸುವುದಕ್ಕೆ ವಿಶೇಷ ಮಹತ್ವವಿದೆ. ಜೀವನದ ನಮ್ಮೆಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಲು, ಸಂತಾನ ಭಾಗ್ಯವನ್ನು ಪಡೆಯಲು ನಾವು ತಪ್ಪದೇ ಲಲಿತಾ ಸಹಸ್ರನಾಮವನ್ನು ಪಠಿಸಬೇಕು.
Leave a Reply