Quoted by Anandathirtha Sharma

ಗಾವೋ ವಿಶ್ವಸ್ಯ ಮಾತರಃ
ಹಸುವಿನ ಶರೀರದಿಂದ ಹಾಲು, ತುಪ್ಪ [ಮಾತ್ರವಲ್ಲದೇ]; ಎತ್ತುಗಳು, ಹಸುಗಳು ಉತ್ಪನ್ನವಾಗುವುದರಿಂದ, ಒಂದು ಪೀಳಿಗೆಯಲ್ಲಿ ನಾಲ್ಕುಲಕ್ಷ ಎಪ್ಪತ್ತೈದು ಸಾವಿರದ ಆರನೂರು ಜನರಿಗೆ ಸುಖ ಸಿಕ್ಕುತ್ತದೆ. ಆದ್ದರಿಂದ, ಅಂದಹ ಪಶುಗಳನ್ನು ಕೊಲ್ಲಬಾರದು ಕೊಲ್ಲಲೂ ಬಿಡಬಾರದು. ದೃಷ್ಟಾಂತಕ್ಕಾಗಿ- ಒಂದು ಹಸುವಿನಂದ ಇಪ್ಪತ್ತುಸೇರು, ಮತ್ತು ಇನ್ನೊಂದರಿಂದ ಎರಡು ಸೇರು ಹಾಲು ಪ್ರತಿದಿನ ಸಿಕ್ಕಿದರೆ. ಅದರ ಸರಾಸರಿ ಹನ್ನೊಂದು ಸೇರು ಒಂದು ಹಸುವಿನಿಂದ ಲಭಿಸುತ್ತದೆ. ಒಂದು ಹಸು ಹದಿನೆಂಟು ತಿಂಗಳು; ಇನ್ನೊಂದು, ಆರು ತಿಂಗಳು ತನಕ ಹಾಲು ಕೊಡುತ್ತೆದೆ. ಇದರ ಸರಾಸರಿ ಹನ್ನೆರಡು ತಿಂಗಳು ಗಳಾಯಿತು. ಈಗ, ಪ್ರತಿಯೊಂದು ಹಸುವಿನ ಜೀವಮಾನದ ಪೂರ್ತದ ಹಾಲಿನಿಂದ 24,960 (ಇಪ್ಪತ್ತು ನಾಲ್ಕು ಸಾವಿರದ ಒಂಬೈನೂರು) ಜನರು ತೃಪ್ತರಾಗಬಹುದು. ಅದಕ್ಕೆ ಆರು ಹೆಣ್ಣು ಕರುಗಳೂ, ಆರು ಗಂಡು ಕರುಗಳೂ ಆಗುತ್ತವೆ. ಅವುಗಳಲ್ಲಿ ಎರಡು ತೀರಿ ಹೋದರೂ, ಹತ್ತು ಉಳಿದೇ ಉಳಿಯುತ್ತವೆ. ಅವುಗಳಲ್ಲಿನ ಐದು ಹೆಣ್ಣು ಕರುಗಳ ಜೀವನ ಕಾಲದಲ್ಲಿ ಲಭಿಸುವ ಹಾಲನ್ನು ಸೇರಿಸಿದರೆ, 1,24,800 (ಒಂದು ಲಕ್ಷ ಇಪ್ಪತ್ತನಾಲ್ಕು ಸಾವಿರದ ಎಂಟನೂರು) ಜನರು ತೃಪ್ತರಾಗಬಹುದು. ಇನ್ನು ಉಳಿದವು ಐದು ಎತ್ತುಗಳು, ಅವು ತಮ್ಮ ಜೀವಿತಕಾಲದಲ್ಲಿ ಕನಿಷ್ಠ ಪಕ್ಷ ಐದು ಸಾವಿರ ಮಣ ಆಹಾರವನ್ನು ಉತ್ಪಾದಿಸಬಲ್ಲವು. ಆ ಆಹಾರದಿಂದ ಪ್ರತಿಯೊಬ್ಬನೂ ಮೂರು ಪಾವು ತಿನ್ನುವುದಾದರೆ, ಎರಡೂವರೆ ಲಕ್ಷ ಜನರಿಗೆ ತೃಪ್ತಯುಂಟಾಗುತ್ತದೆ. ಹಾಲು ಮತ್ತು ಆಹಾರ ಸೇರಿಸಿ,3,74,800 (ಮೂರು ಲಕ್ಷ ಎಪ್ಪತ್ತು ನಾಲ್ಕು ಎಂಟನೂರು) ಜನರು ತೃಪ್ತರಾಗುತ್ತಾರೆ. ಎರಡು ಸಂಖ್ಯೆಗಳನ್ನೂ ಸೇರಿಸಿದರೆ, ಒಂದು ಹಸುನಿನ ಪೀಳಿಗೆಯಲ್ಲಿ 4,75,600(ನಾಲ್ಕು ಲಕ್ಷ ಎಪ್ಪತ್ತೈದು ಸಾವಿರದ ಆರನೂರು) ಜನರು ಒಂದು ಸಾರಿ ಪಾಲನೆ ಪಡೆಯುತ್ತಾರೆ ಮತ್ತು ಪೀಳಿಗೆಯ ಮೇಲೆ ಪೀಳಿಗೆಯನ್ನು ವರ್ಧಿಸಿ ಗಣನೆ ಮಾಡಿದರೆ. ಅಸಂಖ್ಯಾತ ಮಾನವರ ಪಾಲನವಾಗುತ್ತದೆ.

Leave a Reply

Your email address will not be published. Required fields are marked *